ಸಿಲ್ಕ್ ಸ್ಮಿತಾ ಆಕೆಯ ಸೌಂದರ್ಯವೇ ಆಕೆಗೆ ಮುಳುವಾಯ್ತಾ..?

in ಮನರಂಜನೆ/ಸಿನಿಮಾ 387 views

ಸಿಲ್ಕ್ ಸ್ಮಿತಾ ಒಂದು ಕಾಲದ ದಕ್ಷಿಣ ಭಾರತ ಚಿತ್ರರಂಗದ ಸೆಕ್ಸ್ ಬಾಂಬ್ ಎಂದೇ ಗುರುತಿಸಿಕೊಂಡಿದ್ದ ಈ ಮಾದಕ ನಟಿ ಸುಮಾರು ಎರಡು ದಶಕ ದಕ್ಷಿಣ ಭಾರತದ ಚಿತ್ರರಂಗವನ್ನ ಆಳಿದಾಕ್ಕೆ. ಅದು ಎಂತಹ ಕಳಪೆಯ ಚಿತ್ರವೇ ಆಗಲಿ ಅದರಲ್ಲಿ ಸಿಲ್ಕ್ ಸ್ಮಿತಾರ ಒಂದು ಸಣ್ಣ ನೃತ್ಯ ಅಥವಾ ಆಕೆಯ ಒಂದು ಸಣ್ಣ ದೃಶ್ಯವಿದೆ ಎಂದರೆ ಆ ಚಿತ್ರವನ್ನು ನೋಡುವುದಕ್ಕೆ ಜನ ಮುಗಿಬೀಳುತ್ತಿದ್ದ ಕಾಲವೊಂದಿತ್ತು. ದುಂಡು ಮೈಕಟ್ಟಿನ ಈ ಕೃಷ್ಣಸುಂದರಿನ ಕಣ್ಣು ತುಂಬಿಕೊಳ್ಳುವುದಕ್ಕೆ ಜನ ಥಿಯೇಟರ್ ಮುಂದೆ ನುಗ್ಗುತ್ತಿದ್ದರು. ಈಕೆ ಸಹ ಕಲಾವಿದೆ ಅಥವಾ ಕ್ಯಾಬರೆ ಡ್ಯಾನ್ಸರ್ ಆಗಿದ್ದರು ಸಹ ಅಸಂಖ್ಯಾತ ಯುವಪಡೆಯ ಡ್ರೀಮ್ ಗರ್ಲ್ ಆಗಿ ಹೋಗಿದ್ದಳು. ಸಿಲ್ಕ್ ಸ್ಮಿತಾ ಮೂಲತಃ ಆಂಧ್ರದವರು. ಅಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಇಲ್ಲೂರಿನಲ್ಲಿ 1960 ರ ಡಿಸೆಂಬರ್ 2 ರಂದು ರಾಮುಲ್ ಹಾಗೂ ಸರಸಮ್ಮ ಎಂಬ ದಂಪತಿಗೆ ಜನಿಸಿದ ಸಿಲ್ಕ್ ಸ್ಮಿತಾ ಬಡ ಕುಟುಂಬದ ಹೆಣ್ಣು. ಕುಟುಂಬದ ನಿರ್ವಹಣೆಗಾಗಿ ತನ್ನ ಹತ್ತನೇ ವಯಸ್ಸಿನಲ್ಲೇ ಶಾಲೆಯನ್ನ ತೊರೆದು ಸಿಲ್ಕ್ ಸ್ಮಿತಾ ಚಿಕ್ಕ-ಪುಟ್ಟ ಕೂಲಿ ಕೆಲಸಗಳಲ್ಲಿ ತೊಡಗಿಕೊಂಡರು.

ಕಪ್ಪುವರ್ಣದ ಬಾಲಕಿಯಾದರೂ ಮೈಕೈ ತುಂಬಿಕೊಂಡು ನೋಡುವುದಕ್ಕೆ ಆಕರ್ಷಕವಾಗಿದ್ದ ಆಕೆಯ ಮೈಮಾಟವೇ ಆಕೆಗೆ ಶಾಪದಂತೆ ಪರಿಣಮಿಸಿ ಚಿಕ್ಕವಯಸ್ಸಿನಲ್ಲೇ ಆಕೆಗೆ ಬಾಲ್ಯವಿವಾಹವನ್ನ ಮಾಡಲಾಯಿತು. ವಿವಾಹದ ಬಳಿಕವೂ ಆಕೆಗೆ ಸಂಕಷ್ಟ ತಪ್ಪಲಿಲ್ಲ. ಆಕೆಯ ಗಂಡ ಹಾಗೂ ಅತ್ತೆಯ ಮನೆಯವರ ಕಿರುಕುಳ ತಾಳಲಾರದೆ ಬಾಲಕಿ ಸ್ಮಿತಾ ಮನೆಬಿಟ್ಟು ಆ ಊರನ್ನೇ ಬಿಟ್ಟು ಹೋದಳು. ಅಲ್ಲಿಂದ ಆಕೆ ಬಂದದ್ದು ಚೆನೈಗೆ. ಮೊದ ಮೊದಲು ಚಿಕ್ಕ ಟಚಪ್ ಕಲಾವಿದೆಯಾಗಿ ವೃತ್ತಿಗಿಳಿದ ಸಿಲ್ಕ್ ಸ್ಮಿತ ಇತರ ನಟಿಯರಿಗೆ ಮೇಕಪ್ ಹಚ್ಚುತ್ತ ಕಾಲಕಳೆದರು. ಸ್ಮಿತಾರ ಮೂಲ ಹೆಸರು ವಿಜಯ್ ಲಕ್ಷ್ಮಿ ವಾರ್ಡಾಲಪಟ್ಲ.

ಚೆನ್ನೈನ ಪ್ರಖ್ಯಾತ ಎ.ವಿ.ಎಂ ಸ್ಟುಡಿಯೋದ ನಿರ್ದೇಶಕರಲ್ಲಿ ಒಬ್ಬರಾದ ವಿನೋದ ಚಕ್ರವರ್ತಿಯವರು ಮೊಟ್ಟಮೊದಲು ಸ್ಮಿತಾರನ್ನು ಗಮನಿಸಿ ತಮ್ಮ ವಲಯದೊಳಗೆ ಬರಮಾಡಿಕೊಂಡರು. ಅವರ ಪತ್ನಿ ಸ್ಮಿತಾಗೆ ಇಂಗ್ಲೀಷ್ ಕಲಿಸುವುದರ ಜೊತೆಗೆ ನಟಿಯರಿಗೆ ಇರಬೇಕಾದ ನಡೆ-ನುಡಿ, ಹಾವ-ಭಾವ ಇತ್ಯಾದಿಗಳ ತರಬೇತಿಯನ್ನು ನೀಡಿದರು. ವಿನೋದ್ ಚಕ್ರವರ್ತಿ ವಿಜಯಲಕ್ಷ್ಮಿ ಅನ್ನುವ ಹೆಸರಿನ ಬದಲಿಗೆ ಸ್ಮಿತಾ ಅನ್ನುವ ಹೆಸರನ್ನು ಕೊಟ್ಟರು. 1979 ರಲ್ಲಿ ಆಕೆ ನಟಿಸಿದ ಮೊದಲ ಚಿತ್ರ ಒಂಡಿ ಚಕಾರಮ್ ಬಿಡುಗಡೆಯಾಯಿತು. ಆ ಚಿತ್ರದಲ್ಲಿ ಆಕೆಯ ಪಾತ್ರದ ಹೆಸರು ಸಿಲ್ಕ್. ಮುಂದೆ ಇದೆ ಆಕೆಯ ಪಾಪ್ಯುಲರ್ ನಿಕ್ ನೇಮ್ ಆಯಿತು. ಈ ಚಿತ್ರದ ಯಶಸ್ಸಿನ ಬಳಿಕ ಸ್ಮಿತಾರಿಗೆ ಸಾಲು-ಸಾಲು ಅವಕಾಶಗಳು ಬಂದವು. ನಂತರದಲ್ಲಿ ಆಕೆ ತಮಿಳು ಮಾತ್ರವಲ್ಲದೆ ತೆಲುಗು, ಮಲೆಯಾಳಂ, ಕನ್ನಡ ಹಾಗೂ ಹಿಂದಿಯಲ್ಲೂ ನಟಿಸಿ ಯಶಸ್ವಿ ಚರ್ತುಭಾಷಾ ಕಲಾವಿದೆಯಾದರು.


1982 ರಿಂದ 90 ರವರೆಗೆ ಸ್ಮಿತಾ ತಮಿಳು, ತೆಲುಗು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು. 1993 ರಲ್ಲಿ ಅಳಿಮಯ್ಯ ಚಿತ್ರದ ಮೂಲಕ ಕನ್ನಡಕ್ಕೆ ಪ್ರವೇಶ ಮಾಡಿದ ಸ್ಮಿತಾ ಮುಂದೆ ಚಿನ್ನ, ಗಣೇಶನ ಗಲಾಟೆ, ಲಾಕಪ್ ಡೆತ್, ಹಳ್ಳಿ ಮೇಷ್ಟ್ರು ಮುಂತಾದ ಕನ್ನಡ ಚಿತ್ರಗಳಲ್ಲಿ ಮಿಂಚಿದ್ದರು. ಸ್ಮಿತಾ ಮುಂದೆ ಯಾರನ್ನು ಮದುವೆಯಾಗಲಿಲ್ಲ, ಪ್ರೀತಿಸಲಿಲ್ಲ. ಕೇವಲ ತಾನಾಯ್ತು ತನ್ನ ವೃತ್ತಿಯಾಯಿತು ಅಂತ ಇದ್ದವರು. ಸಿಲ್ಕ್ ಸ್ಮಿತಾ ನಿಜಜೀವನದಲ್ಲಿ ಅಂತರ್ಮುಖಿ ವ್ಯಕ್ತಿ. ಯಾರೊಂದಿಗೂ ಬೆರೆಯದ ಏಕಾಂಗಿ ವ್ಯಕ್ತಿಯಾಗಿದ್ದರು. ಅವರ ಈ ಗುಣ ಹಲವು ಸಲ ಅವರ ಬಗೆಗೆ ವಿವಾದಗಳು ಏಳಲು ಸಹ ಕಾರಣವಾಗಿವೆ. ಸ್ಮಿತಾ ಅಹಂಕಾರಿ, ಕೊಬ್ಬಿನ ನಟಿ ಎಂಬ ಮೂದಲಿಕೆಗಳು ಸಾಮಾನ್ಯವಾಗಿದ್ದವು. ಆದರೆ ವಾಸ್ತವವಾಗಿ ಆಕೆ ನೇರ ಹಾಗೂ ನಿಷ್ಠುರ ನುಡಿಯನ್ನು ನುಡಿಯವರಾಗಿದ್ದರು.

1995 ರ ಹೊತ್ತಿಗೆ ಸ್ಮಿತಾ ಅತಿಯಾದ ಖಿನ್ನತೆಗೂ ಒಳಗಾಗಿ ಆ ಹೊತ್ತಿಗೆ ಚಿತ್ರರಂಗದ ತಿರಸ್ಕಾರದಿಂದ ಬೇಸತ್ತು ನಿತ್ಯ ಮದ್ಯವ್ಯಸನಿಯು ಸಹ ಆಗಿ ಹೋಗಿದ್ದರು. ತಮಿಳಿನ ಇನ್ನೊಬ್ಬ ಖ್ಯಾತ ಕ್ಯಾಬರೆ ನಟಿಯಾಗಿದ್ದ ಅನುರಾಧ ಸ್ಮಿತಾರ ಆಪ್ತ ಗೆಳತಿಯಾಗಿದ್ದಳು. 1996 ರಲ್ಲಿ ಸೆಪ್ಟೆಂಬರ್ 23 ರಂದು ಗೆಳತಿ ಅನುರಾಧರಿಗೆ ಕರೆ ಮಾಡಿದ ಸ್ಮಿತಾ ಯಾವುದೋ ಗಂಭೀರ ಸಂಗತಿಯ ಬಗ್ಗೆ ಚರ್ಚಿಸಲು ಅನುರಾಧರನ್ನ ಮನೆಗೆ ಆಹ್ವಾನಿಸಿದರು. ಇನ್ನು ಸಿಲ್ಕ್ ಸ್ಮಿತಾ ಕೊನೆಯದಾಗಿ ಕರೆ ಮಾಡಿದ್ದು ನಟ ರವಿಚಂದ್ರನ್ ಅವರಿಗೆ. ಆ ಕ್ಷಣದಲ್ಲಿ ಅವರು ಶೂಟಿಂಗ್ ನಲ್ಲಿ ಇದ್ದಿದ್ದರಿಂದ ಅವರು ಸಿಗಲಿಲ್ಲ. ನಟಿ ಅನುರಾಧ ತಮ್ಮ ಕಾರ್ಯ ಮುಗಿಸಿ ಚೆನ್ನೈನ ಸ್ಮಿತಾರ ನಿವಾಸದ ಬಳಿಗೆ ಬರುವಷ್ಟರಲ್ಲಿ ಸ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದರು.


ನೇಣುಬಿಗಿದ ಸ್ಥಿತಿಯಲ್ಲಿ ಚೆನ್ನೈನ ಅವರ ಅಪಾರ್ಟ್ಮೆಂಟ್ ನಲ್ಲಿ ದೊರೆತಿದ್ದ ಅವರ ಶವ ಅನೇಕ ಸಂಶಯಗಳನ್ನು ಹುಟ್ಟುಹಾಕಿತ್ತು. ಆಕೆಯ ದೇಹದಲ್ಲಿ ಅತ್ಯಧಿಕ ಪ್ರಮಾಣದ ಆಲ್ಕೋಹಾಲ್ ಕಂಟೆಂಟ್ ಇರುವುದನ್ನು ಡೇತ್ ವರದಿ ದೃಢಪಡಿಸಿತು. ಆಕೆ ಖಿನ್ನತೆಯಿಂದ ಸತ್ತಿರಬಹುದು ಅಂತ ಹಲವರಿಗೆ ಅನಿಸಿದರೂ ಆಕೆ ಸಿನಿಮಾವನ್ನ ನಿರ್ಮಾಣವನ್ನ ಮಾಡುವುದಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದು ಸಹ ಆಕೆಗೆ ಆತ್ಮಹತ್ಯೆಗೆ ಪ್ರೇರೇಪಿಸಿರಬಹುದು ಅಂತ ಅಂದಾಜು ಮಾಡಲಾಗಿದೆ. ಆಕೆಯ ಸಾವಿನ ಸುತ್ತ ಅನೇಕ ನಾಯಕ ನಟರ ಹೆಸರುಗಳು ಒಂದಷ್ಟು ಕಾಲ ಹರಿದಾಡಿತ್ತು. ಆದರೆ ಇಂದಿಗೂ ಸಿಲ್ಕ್ ಸ್ಮಿತಾ ಸಾವು ನಿಗೂಢವಾಗಿದೆ.

– ಸುಷ್ಮಿತಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Share this on...