ಕಳೆದು ಹೋದ ಮೊಬೈಲ್ ಮತ್ತೆ ಸಿಕ್ಕಿದ್ದಾಗ ಅದರಲ್ಲಿದ್ದ ಭಯಾನಕ ಸೆಲ್ಫಿ ಯಾರದು ಗೊತ್ತಾ..?

in ಮನರಂಜನೆ 288 views

ಯುವಕನೊಬ್ಬ ಮನೆಯ ಪಕ್ಕದಲ್ಲಿ ಇರುವ ಅರಣ್ಯಕ್ಕೆ ಟ್ರಕ್ಕಿಂಗ್ ಹೋಗಿ ಅಲ್ಲಿ ತನ್ನ ಮೊಬೈಲ್ ಅನ್ನು ಕಳೆದುಕೊಂಡ. ನಂತರ ಆತನಿಗೆ ಹೇಗೋ ತನ್ನ ಮೊಬೈಲ್ ನ ಸಿಕ್ಕಿತು. ಆಗ ತನ್ನ ಮೊಬೈಲ್ ನ ಪೋಟೋ ಗ್ಯಾಲರಿಯನ್ನು ಓಪನ್ ಮಾಡಿದ ಯುವಕನಿಗೆ ದೊಡ್ಡ ಶಾಕ್ ಕಾದಿತ್ತು. ಕಾರಣ ಭಯಾನಕ ಎನಿಸುವಂತಹ ಸೆಲ್ಫಿ ಫೋಟೋಗಳು ಹಾಗೂ ವಿಡಿಯೋಗಳು ಆತನ ಮೊಬೈಲ್ ನಲ್ಲಿ ರೆಕಾರ್ಡ್ ಆಗಿತ್ತು. ಅಷ್ಟಕ್ಕೂ ಆ ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದದು ಯಾರು..? ಆ ಪೋಟೋದಲ್ಲಿ ಇದದ್ದು ಯಾರು ಗೊತ್ತಾ..? ಮಲೇಶಿಯಾ ದೇಶಕ್ಕೆ ಸೇರಿದ ರೋಡ್ ಜಿ ಅನ್ನುವ 20 ವರ್ಷದ ಯುವಕ ತನ್ನ ಮನೆಯ ಸಮೀಪದಲ್ಲೇ ಇರುವ ಅರಣ್ಯಕ್ಕೆ ಟ್ರಕ್ಕಿಂಗ್ ಹೋಗಿ ರಾತ್ರಿ ಅಲ್ಲಿಯೇ ಟೆಂಟ್ ಹಾಕಿಕೊಂಡು ಮಲಗಿದ್ದ. ಆದರೆ ಬೆಳಗ್ಗೆ ಎದ್ದು ನೋಡಿದಾಗ ತನ್ನ ಪಕ್ಕದಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಕಾಣಿಸಲಿಲ್ಲ. ಇದರಿಂದ ಗಾಬರಿಗೊಂಡ ಆತ ಕಾಡಿನ ಸುತ್ತ-ಮುತ್ತ ಎಲ್ಲಾ ಕಡೆ ಹುಡುಕಾಡಿದ. ಆದರೆ ಆತನ ಮೊಬೈಲ್ ಮಾತ್ರ ಸಿಗಲಿಲ್ಲ. ಆಗ ಬೇರೆಯವರ ಫೋನ್ ತೆಗೆದುಕೊಂಡು ತನ್ನ ಮೊಬೈಲ್ ಗೆ ಕಾಲ್ ಮಾಡಿದಾಗ ಹತ್ತಿರದಲ್ಲೇ ಫೋನ್ ರಿಂಗ್ ಆಗುತ್ತಿತ್ತು. ಆಗ ಅಲ್ಲಿಗೆ ಹೋಗಿ ನೋಡಿದಾಗ ಮರದ ಮೇಲೆ ಕುಳಿತಿದ್ದ ಕೋತಿಯೊಂದರ ಕೈಯಲ್ಲಿ ಆ ಯುವಕನ ಮೊಬೈಲ್ ಇತ್ತು.

ಮರದ ಮೇಲೆ ಕುಳಿತಿದ್ದ ಮಂಗ ಓಡಿ ಹೋಗದಂತೆ ತುಂಬಾ ಉಪಾಯ ಮಾಡಿ ಜಾಗರೂಕತೆಯಿಂದ ಮಂಗನ ಕೈಯಲ್ಲಿದ್ದ ಫೋನ್ ತೆಗೆದುಕೊಳ್ಳುವಲ್ಲಿ ಆ ಯುವಕ ಯಶಸ್ವಿ ಆದನು. ನಂತರ ಹೇಗೋ ತನ್ನ ಮೊಬೈಲ್ ಸಿಕ್ಕಿತಲ್ಲ ಅನ್ನುವ ಖುಷಿಯಲ್ಲಿ ಮೊಬೈಲ್ ಸರಿ ಇದೆಯೋ ಇಲ್ಲವೋ ಎಂದು ಚೆಕ್ ಮಾಡಿದಾಗ ಎಲ್ಲಾ ಸರಿ ಇತ್ತು. ಆದರೆ ಫೋಟೋ ಗ್ಯಾಲರಿ ಓಪನ್ ಮಾಡಿದ ಯುವಕನಿಗೆ ಆ ಫೋಟೋ ಗ್ಯಾಲರಿ ನೋಡಿ ಶಾಕ್ ಆಗಿತ್ತು. ಕಾರಣ ಮಂಗ ತೆಗೆದುಕೊಂಡಿರುವ ಸೆಲ್ಫಿ ಫೋಟೋ ಹಾಗೂ ವಿಡಿಯೋಗಳು ಕಾಣಿಸಿತು.


ಯುವಕನಿಂದ ಮೊಬೈಲ್ ತೆಗೆದುಕೊಂಡ ಆ ಮಂಗ ತಾನೇ ವಿಚಿತ್ರವಾಗಿ ಭಯಾನಕವಾಗಿ ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದುಕೊಂಡಿತ್ತು. ಇದು ಎಲ್ಲರೂ ಶಾಕ್ ಹಾಗೂ ಬೇರಾಗಾಗುವಂತೆ ಮಾಡಿದೆ. ಸೆಲ್ಫಿ ತೆಗೆದುಕೊಳ್ಳುವಾಗ ಹೆಚ್ಚು ಜನ ಮಂಗನ ರೀತಿ ಪೋಸ್ ಕೊಡುತ್ತಾರೆ. ಈಗ ಮಂಗ ತಾನೆ ಸೆಲ್ಫಿ ತೆಗೆದುಕೊಂಡಿರುವುದು ವಿಚಿತ್ರವೇ ಸರಿ. ಆ ಮಂಗ ತೆಗೆದುಕೊಂಡಿರುವ ಸೆಲ್ಫಿ ಫೋಟೋಗಳು ಈಗ ಎಲ್ಲಾ ಸಕ್ಕತ್ ವೈರಲ್ ಆಗುತ್ತಿದ್ದು ಮಂಗನ ಸೂಕ್ಷ್ಮ ಬುದ್ಧಿಗೆ ಜನ ಫಿದಾ಼ ಆಗಿದ್ದಾರೆ.

– ಸುಷ್ಮಿತಾ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Share this on...