ಅಕ್ಟೊಬರ್ ೧ ಕ್ಕೆ ಪರ್ಫೆಕ್ಟ್ ಗರ್ಲ್ ಆಗಲಿದ್ದಾರಂತೆ ಅದಿತಿ ಪ್ರಭುದೇವಾ?

in ಸಿನಿಮಾ 260 views

ಪ್ರಪಂಚಾನೇ ಒಂದು ರೌಂಡ್ ಹಾಕಿಕೊಂಡು ಬಂದರೂ ಸಿಗದಂತಹ ಚೆಲುವೆ ಈ ಅದಿತಿ ಪ್ರಭುದೇವ್, ಹಾಲಿನ ಕೆನೆಯಂತೆ ಬಿಳುಪಾಗಿರುವ ಈ ಮಿಲ್ಕಿ ಗರ್ಲ್ ನ ನಟನಾ ಕೌಶಲ್ಯ, ನಡವಳಿಕೆ, ಕನ್ನಡದ ಸಿನಿಮಾಗಳ ಬಗ್ಗೆ ಇರುವ ಒಲವು, ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಮಾತನಾಡುವ  ಶೈಲಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುಂದರ ಮುಖ, ಬಳುಕುವ ನಡು, ಪಟಪಟ ಎಂದು ಮಾತನಾಡುವ ಪರಿಯಿಂದ ಅನೇಕ ಅಭಿಮಾನಿಗಳನ್ನು ಹೊಂದಿರುವ ಅದಿತಿ ಅವರ ಸಿನಿಮಾಗಳು ತಕ್ಕ ಮಟ್ಟ ಯಶಸ್ಸು ಕಾಣುತ್ತಿಲ್ಲ. ಆದರೆ ಇವರ ನಟನಾ ಕೌಶಲ್ಯಕ್ಕೆ ಚಿತ್ರರಂಗ ಮತ್ತು ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ . ಮೂಲತಃ ದಾವಣಗೆರೆಯಲ್ಲಿ ಜನಿಸಿದ ನಟಿ ಅದಿತಿ ಪ್ರಭುದೇವಾ ಅವರು ,  ಎಂಜಿನಿಯರಿಂಗ್ ಪದವಿ ಮತ್ತು ಎಂ.ಬಿ.ಎ ಯನ್ನು ಅಲ್ಲಿಯೇ ಮುಗಿಸುತ್ತಾರೆ. ಅನಂತರ ಕಿರುತೆರೆಯಲ್ಲಿ ಗುಂಡಯ್ಯನ ಹೆಂಡತಿ ಎಂಬ ಧಾರಾವಾಹಿಯ ಮುಖಾಂತರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, 2017 ರಲ್ಲಿ ಅಜಯ್ ರಾವ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಂತಹ ಧೈರ್ಯಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಾರೆ.

ಆದರೆ ಈ ಸಿನಿಮಾ ಅಂದುಕೊಂಡಂತೆ ಯಶಸ್ವಿಯಾಗದ ಕಾರಣ ಅದಿತಿ ಮತ್ತೆ ನಾಗಕನ್ನಿಕೆ ಎಂಬ ಧಾರಾವಾಹಿಯ ಮುಖಾಂತರ ದೂರದರ್ಶನಕ್ಕೆ ಮರಳುತ್ತಾರೆ. ತಾವು ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ಆಸಕ್ತಿ ಉಳ್ಳವರಿಗೆ ಕಲಾದೇವತೆ ಎಂದೂ ಕೈಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಅದಿತಿ ಅವರಿಗೆ ಮತ್ತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಹೌದು, 2019  ರಲ್ಲಿ ಸಿಂಪಲ್ ಸುನಿ ನಿರ್ದೇಶನದ ಬಜಾರ್, ಚಿರಂಜೀವಿ ಸರ್ಜಾ ಅವರ ಜೊತೆಗೆ ಸಿಂಗ, ದಯಾಳ್ ಪದ್ಮನಾಭನ್ ಅವರ ನಿರ್ದೇಶನದ ರಂಗನಾಯಕಿ, ಸತೀಶ್ ನೀನಾಸಂ ಅವರ ಜೊತೆ ಬ್ರಹ್ಮಚಾರಿ ಎಂಬ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಈಕೆಯ ಅಂದ ಮತ್ತು ವಯ್ಯಾರಕ್ಕೆ ಯುವ ಪೀಳಿಗೆಗಳು ಮಾರು ಹೋಗಿದ್ದಾರೆ. ನಟನೆಯಲ್ಲಿ ಚತುರೆಯಾಗಿದ್ದರೂ ಈಕೆಯ ಅದೃಷ್ಟ ಸರಿಯಿಲ್ಲ ಅನ್ನಿಸುತ್ತದೆ. ಮಾಡಿದ ನಾಲ್ಕು ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ವಿ ಕಾಣಲಿಲ್ಲ.!  ಆದರೆ ಇವರ ಬಳಿ ಇದೀಗ ಸಾಲುಸಾಲು ಸಿನಿಮಾಗಳಿವೆ. ಕನ್ನಡ ಭರವಸೆಯ ನಟಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಅದಿತಿ ಪ್ರಭುದೇವ, ಇದೀಗ ಹೊಸ ಪ್ರಯತ್ನ ಮಾಡುತ್ತಿದ್ದು,ಮ್ಯೂಸಿಕ್ ಅಲ್ಬಮ್ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ ೧ ರಂದು ಈ ಆಲ್ಬಮ್ ಬಿಡುಗಡೆಯಾಗುತ್ತಿದೆ.’ಪರ್ಫೆಕ್ಟ್ ಗರ್ಲ್’ ಎಂಬ ಶೀರ್ಷಿಕೆಯಲ್ಲಿ ಈ ಆಲ್ಬಮ್ ಬರುತ್ತಿದ್ದು, ಅಭಿ ಮಲ್ಟಿ ಎಂಬುವವರು ಇದನ್ನು ನಿರ್ಮಿಸಿದ್ದಾರೆ.  ವಿಶೇಷವೇನೆಂದರೆ ಅಭಿ ಆವರೇ ಸಾಹಿತ್ಯ ರಚಿಸಿ,  ಕಂಪೋಸ್ ಕೂಡ ಮಾಡಿ ಸ್ವತಃ  ತಾವೇ ಹಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ರಿಲೀಸ್ ಆಗುತ್ತಿದ್ದು, ಅಭಿಷೇಕ್ ಮಲ್ನಾಡ್  ಅವರು ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ ಮತ್ತು ಶಿವಸೇನಾ ಕ್ಯಾಮರಾ ನಿಭಾಯಿಸಿದ್ದಾರೆ. ‘ಪರ್ಫೆಕ್ಟ್ ಗರ್ಲ್’ ಆಲ್ಬಮ್ ಸಾಂಗ್‌ನಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದು, ಸಂಗೀತ ಪ್ರಿಯರು ಹಾಗೂ ಅದಿತಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Share this on...